ಕರಾವಳಿ

ಕುಂಬ್ರ: ವ್ಯಕ್ತಿಗೆ ಬೈಕ್ ಡಿಕ್ಕಿ, ಗಾಯ

ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿ ಎಂಬಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.

ಸಾರೆಪುಣಿಯಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಗೊಂಡ ವೇಳೆ ಅವರನ್ನು ರಕ್ಷಿಸಲೆಂದು ಧಾವಿಸಿದ ಸ್ಥಳೀಯ ಅಂಗಡಿ ಮಾಲಕ ಅರಬಿಕುಂಞಿ ಎಂಬವರು ರಸ್ತೆಯ ಇನ್ನೊಂದು ಬದಿಗೆ ಹೋಗುವ ವೇಳೆ ಅವರಿಗೆ ಬೈಕ್ ಡಿಕ್ಕಿ ಹೊಡೆದಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಜ.18ರಂದು ನಡೆದಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!