ಕರಾವಳಿ

ಪುತ್ತೂರು ವಿಧಾನಸಭಾ ಕ್ಷೇತ್ರ: 9 ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಮಂಜೂರು: ಶಾಸಕ ಅಶೋಕ್ ರೈ



ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಗೆ 9  ಆರೋಗ್ಯ ಮತ್ತು ಕ್ಷೇಮ ಕಟ್ಟಡ ಮಂಜೂರಾಗಿದ್ದು ಈ  ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದು  ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸೇವೆ ಮಾಡುತ್ತಿರುವ  ಸಮುದಾಯ ಆರೋಗ್ಯ ಅಧಿಕಾರಿಯನ್ನು ಸರಕಾರ  ನೇಮಿಸಿದ್ದರೂ ಅವರಿಗೆ ಸೂಕ್ತ ಕಟ್ಟಡದ ವ್ಯವಸ್ಥೆಯನ್ನು  ಮಾಡಿರಲಿಲ್ಲ. ಇದೀಗ ಪುತ್ತೂರಿಗೆ 9 ಕಟ್ಟಡ ಮಂಜೂರಾಗಿದೆ.


ಪುತ್ತೂರು ತಾಲೂಕಿನ ನರಿಮೊಗರು, ಬೆಟ್ಟಂಪಾಡಿ, ಬನ್ನೂರು, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ಕೆಯ್ಯೂರು, ಪಡ್ನೂರು, ಕುರಿಯ ಮತ್ತು ನೆಕ್ಕಿಲಾಡಿಯಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯ  ನಡೆಯಲಿದೆ. ಕಟ್ಟಡಕ್ಕೆ ತಲಾ 65 ಲಕ್ಷ ಅನುದಾನವನ್ನೂ  ಮಂಜೂರು ಮಾಡಲಾಗಿದೆ.


ಈ ಕಟ್ಟಡದಲ್ಲಿ ಸಮುದಾಯ ಆರೋಗ್ಯ  ಅಧಿಕಾರಿಯೋರ್ವರು ಗ್ರಾಮಸ್ಥರಿಗೆ ಸೇವೆಯನ್ನು  ಒದಗಿಸಲಿದ್ದಾರೆ. ಈ ಕೇಂದ್ರದಲ್ಲಿ ಚಿಕಿತ್ಸೆಯ ಜೊತೆಗೆ  ಸರಕಾರದ ವಿವಿಧ ಯೋಜನೆಗಳನ್ನು ಮನೆ ಮನೆಗೆ  ತಲುಪಿಸುವ ಕೆಲಸವೂ ಈ ಕೇಂದ್ರದ ಮೂಲಕ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಕಟ್ಟಡ  ನಿರ್ಮಾಣವಾಗುವುರೊಂದಿಗೆ ಹಲವು ವರ್ಷಗಳ ಬೇಡಿಕೆ  ಈಡೆರಿದಂತಾಗಿದೆ.

 

Leave a Reply

Your email address will not be published. Required fields are marked *

error: Content is protected !!