ಕರಾವಳಿ

ಬಾವಿಗೆ ಬಿದ್ದ ಮಗು: ರಕ್ಷಿಸಿದ ಸ್ಥಳೀಯರು

ಮಂಗಳೂರು: ಕೊಣಾಜೆ ಸಮೀಪದ ಮಾರಿಯಮ್ಮಗೋಳಿ ಪರಿಸರದ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಆದಿತ್ಯವಾರ ಸಂಜೆ ನಡೆದಿದ್ದು ಕೂಡಲೇ ಮಗುವಿನ ಚಿಕ್ಕಪ್ಪ ಹಾಗೂ ಸ್ಥಳೀಯ ಯುವಕರಿಬ್ಬರು ಬಾವಿಗಿ ಳಿದು ಮಗುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.



ಮಗು ಆಟ ಆಡುತ್ತಾ ಅಂಗಳ ಸಮೀಪದ ಬಾವಿಗೆ ಬಿದ್ದಿತ್ತು. ಈ ವೇಳೆ ಮನೆ ಮಂದಿ ಬೊಬ್ಬೆ ಹೊಡೆದಿದ್ದು, ಬೊಬ್ಬೆ ಕೇಳಿ ಕೂಡಲೇ ಮಗುವಿನ ಚಿಕ್ಕಪ್ಪ, ಸ್ಥಳೀಯ ಯುವಕರಾದ ಜೀವನ್, ವಿವೇಕ್ ಪೂಜಾರಿ ಸ್ಥಳಕ್ಕೆ ಆಗಮಿಸಿ ಬಾವಿಗಿಳಿದು ಮಗುವಿನ ಪ್ರಾಣವನ್ನು ರಕ್ಷಿಸಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ. ಬಾವಿಗಿಳಿದು ಮಗುವನ್ನು ರಕ್ಷಣೆ ಮಾಡಿದ ಮಗುವಿನ ಚಿಕ್ಕಪ್ಪ, ಸ್ಥಳೀಯ ಯುವಕರಾದ ಜೀವನ್ ಹಾಗೂ ವಿವೇಕ್ ಪೂಜಾರಿಯವರ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!