ಕರಾವಳಿಕ್ರೈಂ

ಮಂಗಳೂರು: ಕ್ಯಾಬ್ ಚಾಲಕನಿಗೆ ಅವಾಚ್ಯ ಬೈಗುಳ, ಟೆರರಿಸ್ಟ್ ಎಂದು ನಿಂದನೆ ಆರೋಪ-ಪ್ರಕರಣ ದಾಖಲು

ಮಂಗಳೂರು: ಕ್ಯಾಬ್ ಚಾಲಕನಿಗೆ ಅವಾಚ್ಯವಾಗಿ ಬೈದು ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು ನಿಂದನೆ ಆರೋಪದಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.

ಅ9ರಂದು ರಾತ್ರಿ ಕೇರಳ ಮೂಲದ ಸಂತೋಷ್ ಅಬ್ರಾಹಂ, ಜಯಕೃಷ್ಣನ್ ಮತ್ತು ವಿಮಲ್ ಎಂಬುವರುಗಳು Uber ಮತ್ತು Rapido Captain ಆಪ್ ಮೂಲಕ ಕ್ಯಾಬ್ ಬುಕ್ ಮಾಡಿ  ಬಿಜೈ ನ್ಯೂ ರೊಡ್, ಮಂಗಳೂರು ಪಿಕ್ ಆಪ್ ಅಡ್ರೆಸ್ ನೀಡಿದ್ದು, ಇದನ್ನು ನೋಡಿ  ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ರವರು ಆಪ್ ಮೂಲಕ ಕಾಲ್ ಮಾಡಿ ಪಿಕ್ ಆಪ್ ಬಗ್ಗೆ ವಿಚಾರಿಸಿದಾಗ ಆ ಕಡೆಯಿಂದ ಹಿಂದಿ ಭಾಷೆಯಲ್ಲಿ ಮಾತನಾಡಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ಅವರಿಗೆ ಮುಸ್ಲಿಂ ತೀವ್ರವಾದಿ, ಟೆರರಿಸ್ಟ್,  ಎಂದು ಅಪಹಾಸ್ಯವಾಗಿ ಮಾತನಾಡಿ, ಮುಸ್ಲಿಮ್ ಟೆರರಿಸ್ಟ್ ಎಂದು ಹಿಂದಿ ಭಾಷೆಯಲ್ಲಿ ಬೊಬ್ಬೆ ಹಾಕಿ, ಮಲಯಾಳಂ ಭಾಷೆಯಲ್ಲಿ ತಾಯಿಗೆ ಅವಾಚ್ಯವಾಗಿ ಬೈದಿರುತ್ತಾರೆ.  ಈ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ರವರು ನೀಡಿದ ದೂರಿನಂತೆ ಅ.10ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 103/2025 ಕಲಂ: 352, 353(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!