ದ್ವೇಷ ಭಾಷಣ ಆರೋಪ: ಗಣರಾಜ್ ಭಟ್ ಕೆದಿಲ ವಿರುದ್ಧ ಪ್ರಕರಣ
ಉಪ್ಪಿನಂಗಡಿ: ಗೋಮಾತಾ 3 ಸಂರಕ್ಷಣಾ ಚಳವಳಿ ಪೆರ್ನೆ ವತಿಯಿಂದ ಗೋ ಹತ್ಯೆಯನ್ನು ಖಂಡಿಸಿ ಸೆ.6ರಂದು ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬುವಿನ ಕಾರ್ಲ ರಾಮದ್ವಾರದ ಬಳಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಹಿಂದುತ್ವ ಸಂಘಟನೆಯ ಮುಖಂಡ ಗಣರಾಜ್ ಭಟ್ ಕೆದಿಲ ಮೇಲೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗ್ಗೆ 10:30ರಿಂದ 11:30ರವರೆಗೆ ಪ್ರತಿಭಟನೆ ನಡೆದಿದ್ದು, ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಗಣರಾಜ್ ಭಟ್ ಕೆದಿಲ, ಸ್ಥಳೀಯವಾಗಿ ಧಾರ್ಮಿಕ, ಸಾಮುದಾಯಿಕವಾಗಿ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ಗುಂಪು ಗುಂಪುಗಳ, ಸಮುದಾಯಗಳ ಮಧ್ಯೆ ವೈಮನಸ್ಸು ಬೆಳೆಸುವಂತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.