ಪುತ್ತೂರು:ಅನೈತಿಕ ಚಟುವಟಿಕೆ; ಪೊಲೀಸ್ ದಾಳಿ
ಪುತ್ತೂರು: ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ದಿಢೀರ್ ದಾಳಿ ನಡೆಸಿದ ಪೊಲೀಸರು ಯುವತಿಯನ್ನು ರಕ್ಷಿಸಿ, ಇಬ್ಬರು ಪುರುಷರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಜು.1ರಂದು ನಡೆದಿದೆ.

ಸಾಮೆತ್ತಡ್ಕದ ಮನೆಯೊಂದಕ್ಕೆ ಪೊಲೀಸರ ದಾಳಿ ವೇಳೆ ಮನೆ ಮಾಲಕ, ಯುವತಿ ಮತ್ತು ಪುರುಷನನ್ನು ಅಲ್ಲಿಂದ ತಪ್ಪಿಸಲು ಸಹಾಯ ಮಾಡಿದ್ದಾರೆ. ಆದರೆ ಆ ವೇಳೆ ಬೆನ್ನತ್ತಿದ್ದ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ. ಸುಳ್ಯ ಮೂಲದ ಪುರುಷ ಮತ್ತು ಅವರಿಗೆ ಮನೆ ನೀಡಿದ ವಿಲ್ಫ್ರೆಡ್ ಎಂಬವರನ್ನು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.