ರಾಜ್ಯ

ಮೂಡಿಗೆರೆ: ಹಸಿರು ಫೌಂಡೇಶನ್ ವತಿಯಿಂದ ಪರಿಸರ ಸಂರಕ್ಷಣಾ ಜಾಥಾ

ಮೂಡಿಗೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಫೌಂಡೇಶನ್ ವತಿಯಿಂದ ಮೂಡಿಗೆರೆ ತಾಲೂಕು ಕೇಂದ್ರದಲ್ಲಿ ಪರಿಸರ ಸಂರಕ್ಷಣಾ ಜಾಥಾ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ
ಪರಿಸರ ಸಂರಕ್ಷಣೆ ಮಾಡುವುದರ ಜೊತೆಗೆ  ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ  ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬ ನಾಗರಿಕರು ದೃಢ ಸಂಕಲ್ಪ ಮಾಡಬೇಕು. ಪರಿಸರ ಸಂರಕ್ಷಣೆ ಕೇವಲ ಜೂನ್.5ಕ್ಕೆ ಸೀಮಿತವಾಗಬಾರದು, ಅರಣ್ಯ ನಾಶ ಮಾನವರಿಂದ ನಡೆಯುತ್ತಿದ್ದು ಪ್ರಕೃತಿ ನಾಶ ಮಾಡುವಲ್ಲಿ ಮನುಷ್ಯನ ಪಾತ್ರ ತುಂಬಾ ದೊಡ್ಡದು ಎಂದರು.

ಪ್ಲಾಸ್ಟಿಕ್ ನಿಂದ ಮನುಕುಲದ ವಿನಾಶ ಆಗುತ್ತಿದೆ ಆದರೆ ತಿಳಿದೋ ತಿಳಿಯದೆಯೋ ಪ್ಲಾಸ್ಟಿಕ್ ಬಳಕೆ ನಿರಂತರವಾಗಿ ಸಾಗುತ್ತಿದೆ ಇದಕ್ಕೆ ಕಡಿವಾಣ ಸರ್ಕಾರ, ಜನಸಾಮಾನ್ಯರು ಎಲ್ಲರೂ ಸೇರಿ ಮಾಡಬೇಕು ಎಂದು  ಪರಿಸರ ಪ್ರೇಮಿಗಳಾದ ಕಣಚುರು ವಿನೋದ್ ಉಪನ್ಯಾಸ ನೀಡಿದರು.


ಮೂಡಿಗೆರೆ ತಾಲೂಕು ವಲಯ ಅರಣ್ಯಾಧಿಕಾರಿ ಕಾವ್ಯ ಮಾತನಾಡಿ  ಪ್ಲಾಸ್ಟಿಕ್ ನಿಯಂತ್ರಣ ತುಂಬಾ ಮುಖ್ಯವಾಗಿದೆ. ಮೂಡಿಗರೆ ತಾಲೂಕಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ ಪ್ರಕೃತಿ ಸಂಪತ್ತು ಕೂಡ ಅಗಾಧವಾಗಿದೆ, ಜನಸಾಮಾನ್ಯರು ನಮ್ಮೊಂದಿಗೆ ಕೈ ಜೋಡಿಸಿದರೇ ಪರಿಸರ ಸಂರಕ್ಷಣೆ ಸುಲಭವಾಗುತ್ತದೆ ಎಂದರು.


ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅನುಕುಮಾರ್, ಕಸಬಾ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ, ಸಂಜಯ್ ಕೊಟ್ಟಗೆಹಾರ, ಉಪ ಅರಣ್ಯ ವಲಯಾದಿಕಾರಿಗಳಾದ ರಂಜಿತ್, ಕುಮಾರ್,ಶಿಕ್ಷಕರಾದ ಕಾರಂತ್,  ಶ್ರೀನಿವಾಸ್ ಹಸಿರು ಫೌಂಡೇಷನ್ ನಿರ್ದೇಶಕರುಗಳಾದ ವಿನುಪ್ರಸಾದ್, ಅಭಿಜಿತ್, ಸುನಿಲ್, ಜಯಂತ್,ಪೂರ್ಣೆಶ್, ರತನ್, ಅದೀಪ್ ಊರುಬಗೆ ಪ್ರದೀಪ, ಸುಮಂತ್ ಹಾಗೂ
ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪರಿಸರಾಸಕ್ತರು ಭಾಗವಹಿಸಿದ್ದರು. ನಂತರ ಫೌಂಡೇಷನ್ ನಿರ್ದೇಶಕರ ಸಮ್ಮುಖದಲ್ಲಿ ಪ್ರವಾಸಿ ಮಂದಿರದಲ್ಲಿ ಸಸಿಗಳನ್ನು ನೆಡಲಾಯಿತು.

Leave a Reply

Your email address will not be published. Required fields are marked *

error: Content is protected !!