ಐಪಿಎಲ್ ಫೈನಲ್: RCB ಜೆರ್ಸಿ ತೊಟ್ಟು ತಂಡಕ್ಕೆ ಶುಭ ಹಾರೈಸಿದ ಡಿಕೆಶಿ
ಬೆಂಗಳೂರು: ಇಂದು (ಜೂನ್ 3) ರಾತ್ರಿ ನಡೆಯಲಿರುವ ಐ ಪಿ ಎಲ್ ಮೆಗಾ ಫೈನಲ್ ಪಂದ್ಯಾಟದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಈ ಪಂದ್ಯಾಟಕ್ಕೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ಕರ್ನಾಟಕ ಉಪ ಮುಖ್ಯಮಂತ್ರಿಹಾಗೂ ಕ್ರಿಕೆಟ್ ಪ್ರೇಮಿಯೂ ಆಗಿರುವ ಡಿಕೆ ಶಿವಕುಮಾರ್ ಅವರು ಆರ್ ಸಿ ಬಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಆಟಗಾರರನ್ನು ಹುರಿದುಂಬಿಸಲು ಅವರು ಅರ್ಸಿಬಿ ಜೆರ್ಸಿ ತೊಟ್ಟಿರುವುದು ವಿಶೇಷ. ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡ ಐಪಿಎಲ್ ಕಪ್ ಗೆಲ್ಲಲಿ ಅಂತ ಕಾಯುತ್ತಿದ್ದೇವೆ, ಇವತ್ತು ಮತ್ತೊಂದು ಅವಕಾಶ, ಇಡೀ ಕರ್ನಾಟಕ ಮಾತ್ರ ಅಲ್ಲ ಭಾರತವೂ ನಿಮ್ಮೊಂದಿಗಿದೆ, ನಿಮ್ಮ ಪರಿಶ್ರಮ ಗಮನಿಸುತ್ತಿದ್ದೇವೆ, ಗೆಲುವು ನಿಮ್ಮದೇ, ಕಪ್ ತೆಗೆದುಕೊಂಡು ಬನ್ನಿ ಎಂದು ಡಿಕೆ ಶಿವಕುಮಾರ್ ತಂಡಕ್ಕೆ ಶುಭ ಹಾರೈಸಿದ್ದಾರೆ.