ಬೆಳ್ತಂಗಡಿ: ವಿದ್ಯುತ್ ಶಾಕ್’ಗೆ ಪವರ್ ಮ್ಯಾನ್ ಬಲಿ
ಬೆಳ್ತಂಗಡಿ ತಾಲೂಕಿನ ಓಡಿನ್ಮಾಳ ಗ್ರಾಮದಲ್ಲಿ ಪವರ್ ಮ್ಯಾನ್ ಒಬ್ಬರು ಮೇ 30ರಂದು ವಿದ್ಯುತ್ ಶಾಕ್ ಗೆ ಬಲಿಯಾಗಿದ್ದಾರೆ.

ಕುವೆಟ್ಟು ಗ್ರಾಮದ ಸಹಾಯಕ ಪವರ್ ಮ್ಯಾನ್ ವಿಜೇಶ್ ಮೃತರು. ಓಡಿನ್ಮಾಳ ಗ್ರಾಮದ ಕುಮ್ಮುಂಜ ಎಂಬಲ್ಲಿ ಎಚ್.ಟಿ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ.
ಮೃತ ವಿಜೇಶ್ ಅವರ ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.