ಹಾರಾಡಿ ರೈಲ್ವೇ ಸೇತುವೆಯ ನಿರ್ಮಾಣ ವಿಚಾರ: ರೈಲ್ವೇ ಇಲಾಖೆಯ ಸೀನಿಯರ್ ಇಂಜಿನಿಯರ್ ಜೊತೆ ಶಾಸಕ ಅಶೋಕ್ ರೈ ಚರ್ಚೆ
ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿರುವ ರೈಲ್ವೇ ಸೇತುವೆಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈಲ್ವೇ ಇಲಾಖೆಯ ಸೀನಿಯರ್ ಇಂಜಿನಿಯರ್ ಅನೂಪ್ ಅವರು ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ಶಾಸಕರಾದ ಅಶೋಕ್ ರೈ ಅವರ ಜೊತೆ ಚರ್ಚೆ ನಡೆಸಿದರು.

ಪುತ್ತೂರು – ಉಪ್ಪಿನಂಗಡಿ ರಸ್ತೆ ಚತುಷ್ಪಥವಾಗಿ ಮೇಲ್ದರ್ಜೆಗೇರಲಿರುವ ಕಾರಣ ಹಾರಾಡಿಯ ರೈಲ್ವೇ ಸೇತುವೆಯ ತೆರವು ಮಾಡಿ ಅಗಲೀಕರಣ ಕಾಮಗಾರಿ ನಡೆಯಬೇಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಮತ್ತು ಶಾಸಕರು ಚರ್ಚೆ ನಡೆಸಿದರು. ಈ ಸಂದರ್ಬಧಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ತೌಸೀಫ್ ಉಪಸ್ಥಿತರಿದ್ದರು.