ದೆಹಲಿ ವಿಧಾನ ಸಭೆ ಚುನಾವಣೆ ದಿನಾಂಕ ಪ್ರಕಟ
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕೇಂದ್ರ ಚುನಾವಣ ಆಯೋಗ ಮಂಗಳವಾರ ದಿನಾಂಕ ಘೋಷಿಸಿದೆ. ಫೆ. 5ರಂದು ದೆಹಲಿ ಚುನಾವಣೆ ನಡೆಯಲಿದ್ದು, ಫೆ.08ರಂದು ಫಲಿತಾಂಶ ಘೋಷಣೆಯಾಗಲಿದೆ.

ಫೆ.05ರಂದು ಒಂದೇ ಹಂತದಲ್ಲಿ ದೆಹಲಿಯ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣ ಆಯೋಗ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಲ್ಲಿ 12 ಮೀಸಲು ಕ್ಷೇತ್ರವಾಗಿದೆ. ಒಟ್ಟು 1.55 ಕೋಟಿ ಮತದಾರರಿದ್ದು, ಚುನಾವಣೆಗೂ ಮುನ್ನ ಮತದಾರರು ತಮ್ಮ ಹೆಸರನ್ನು ಆನ್ ಲೈನ್ ನಲ್ಲಿ ಪರಿಶೀಲಿಸಿಕೊಳ್ಳಬೇಕು ಎಂದು ಆಯೋಗ ಮನವಿ ಮಾಡಿಕೊಂಡಿದೆ.