ತುರ್ಕಳಿಕೆ: ಒಂದು ತಿಂಗಳ ಅಂತರದಲ್ಲಿ ಒಂದೇ ಮನೆಯಲ್ಲಿ ಮೂರು ಮರಣ!
ಬೆಳ್ತಂಗಡಿ: ತುರ್ಕಳಿಕೆ ಕರಂಕಿತೋಡಿ ನಿವಾಸಿಯಾಗಿರುವ ಮುಸ್ತಫಾರವರ ಪುತ್ರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮುಹಮ್ಮದ್ ತಂಝೀರ್ ಆ.17 ರಂದು ಕುಪ್ಪೆಟ್ಟಿ ಸಮೀಪ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಇದೇ ಮನೆಯಲ್ಲಿ ಕೆಲವು ದಿನಗಳ ಹಿಂದೆ ಮುಸ್ತಾಫಾ ಅವರ ತಾಯಿ ನಿಧನ ಹೊಂದಿದ್ದು ಬಳಿಕ ಮುಸ್ತಫಾ ಅವರ ತಮ್ಮ ಜಲೀಲ್ ಅವರ ಪತ್ನಿ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇದೀಗ ಒಂದು ತಿಂಗಳೊಳಗೆ ಒಂದೇ ಮನೆಯಲ್ಲಿ ಮೂರು ಮರಣ ಸಂಭವಿಸಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.