ನೆಕ್ಕಿಲಾಡಿ ತಡೆ ಗೋಡೆ ಕುಸಿತ: ಶಾಸಕ ಅಶೋಕ್ ರೈ ಪರಿಶೀಲನೆ
ಪುತ್ತೂರು: ಭಾರೀ ಮಳೆಗೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ನೆಕ್ಕಿಲಾಡಿಯ ಆದರ್ಶ ನಗರದಲ್ಲಿ ನೂತನವಾಗಿ ನಿರ್ಮಾಣವಾದ ತಡೆ ಗೋಡೆ ಕುಸಿತಕ್ಕೊಳಗಾಗಿದೆ. ರಸ್ತೆ ಅಗಲೀಕರಣದ ವೇಳೆ ನಿರ್ಮಾಣವಾದ ಈ ತಡೆ ಗೋಡೆ ಪ್ರಥಮ ಮಳೆಗೆ ಕುಸಿತಕ್ಕೊಳಗಾಗಿದೆ.
ಘಟನಾ ಸ್ಥಳಕ್ಕೆ ಶಾಸಕರಾಸ ಅಶೋಕ್ ರೈಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಇಂಜಿನಿಯರನ್ನು ಕರೆಸಿದ ಶಾಸಕರು ಗುಣಮಟ್ಟದ ತಡೆ ಗೋಡೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರ.ಕಾರದಯದರ್ಶಿ ಎಂ ಎಸ್ ಮಹಮ್ಮದ್, ನೆಕ್ಕಿಲಾಡಿ ವಲಯಾಧ್ಯಕ್ಷರಾದ ಅನಿಮಿನೇಜಸ್, ಮುಖಂಡರಾದ ಯುನಿಕ್ ಅಬ್ದುಲ್ ರಹಿಮಾನ್, ರಮಾನಾಥ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.