ಒಂದು ಮತಕ್ಕೂ ಮಹತ್ವವಿದೆ..ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ..ಅಮ್ಜದ್ ಖಾನ್ ಪೋಳ್ಯ ಕರೆ
ಎ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಕಮ್ಯೂನಿಟಿ ರೀಸರ್ಚ್ ಆಂಡ್ ಡೆವಲಪ್ಮೆಂಟ್ ಸೆಂಟರ್ನ ಚೇರ್ಮೆನ್ ಅಮ್ಜದ್ ಖಾನ್ ಪೋಳ್ಯ ಕರೆ ನೀಡಿದ್ದಾರೆ.
ವಿಶೇಷವಾಗಿ ನಮ್ಮ ಸಮುದಾಯದ ಮಂದಿ ಈ ಬಾರಿಯ ಚುನಾವಣೆಯಲ್ಲಿ ನೂರು ಪ್ರತಿಶತ ಮತದಾನ ಮಾಡಲು ಪ್ರಯತ್ನಿಸಬೇಕು. ಯಾರು ಕೂಡಾ ಮತದಾನದಿಂದ ದೂರವುಳಿಯಬಾರದು.
ವಿದೇಶದಲ್ಲಿರುವವರು ಮತ್ತು ಹೊರ ರಾಜ್ಯದಲ್ಲಿ ಉದ್ಯೋಗ, ಉದ್ಯಮದಲ್ಲಿರುವವರು ಊರಿಗೆ ಬಂದು ಮತ ಚಲಾಯಿಸಲು ಗರಿಷ್ಠ ಪ್ರಯತ್ನ ಮಾಡಬೇಕು. ವೋಟರ್ಲಿಸ್ಟ್ಲ್ಲಿ ತಮ್ಮ ಹೆಸರಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಪ್ರತಿಯೊಂದು ಮತದಾನಕ್ಕೂ ಮಹತ್ವ ಇರುವುದರಿಂದ ಚುನಾವಣೆ ದಿನದಂದು ಪ್ರವಾಸ ಹೋಗುವುದಾಗಲೀ, ಅನ್ಯ ಕಾರಣಗಳಿಂದ ಮತದಾನದಿಂದ ತಪ್ಪಿಸಿಕೊಳ್ಳುವುದಾಗಲೀ ಮಾಡಬಾರದು. ಶುಕ್ರವಾರ ಮತದಾನವಾದ ಕಾರಣ ಬೆಳಿಗ್ಗೆಯೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಪ್ರಯತ್ನಿಸಿದರೆ ಉತ್ತಮ ಎಂದು ಅವರು ತಿಳಿಸಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಸಮುದಾಯದ ಗರಿಷ್ಠ ಮತ ಚಲಾವಣೆ ಆಗುವ ರೀತಿಯಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಅಮ್ಜದ್ ಖಾನ್ ಪೋಳ್ಯ ಮನವಿ ಮಾಡಿದ್ದಾರೆ.