ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಿ ಎಂದು ಈಶ್ವರಪ್ಪರಲ್ಲಿ ಮನವಿ ಮಾಡಿದ ವಿಜಯೇಂದ್ರ
ನಿಮಗೆ ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಬೇಕೆಂದು ಕೆ.ಎಸ್ ಈಶ್ವರಪ್ಪ ಅವರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಿಮ್ಮನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಿ, ಬಿಜೆಪಿ ಹಿತದೃಷ್ಟಿಯಿಂದ ನಮ್ಮೊಂದಿಗೆ ಕೈ ಜೋಡಿಸಿ, ನರೇಂದ್ರ ಮೋದಿಯರು ಮತ್ತೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಆಶಯ, ನೀವು ಬೆಂಬಲ ನೀಡಿ ರಾಘವೇಂದ್ರನನ್ನು ಗೆಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ.