ಉಡುಪಿ: ತಾಯಿ ಮಕ್ಕಳ ಹತ್ಯೆಯನ್ನು ವಿಶ್ವ ದಾಖಲೆ ಎಂದು ಸಂಭ್ರಮಿಸಿದ ‘ಹಿಂದೂ ಮಂತ್ರ’ ಪೇಜ್ ವಿರುದ್ದ ಪ್ರಕರಣ ದಾಖಲು
ಉಡುಪಿ ನೇಜಾರಿನಲ್ಲಿ ನಾಲ್ವರು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ಬರೆದಿದ್ದಾನೆ ಎಂದು ಶೀರ್ಷಿಕೆಯಡಿ ಪೋಸ್ಟ್ ಹಂಚಿಕೊಂಡು ನಾಲ್ವರ ಹತ್ಯೆಯನ್ನು ಸಂಭ್ರಮಿಸಿದ ‘ಹಿಂದೂ ಮಂತ್ರ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ವಿರುದ್ಧ ಉಡುಪಿಯ ಸೆನ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ ಸಂಬಂಧ ಕಿಡಿಗೇಡಿಗಳು ಹತ್ಯೆಯನ್ನು ಸಂಭ್ರಮಿಸಿ ಹಿಂದೂ ಮಂತ್ರ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ನಲ್ಲಿ 15 ನಿಮಿಷದಲ್ಲಿ ನಾಲ್ಕು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ ಎಂದು ಶೀರ್ಷಿಕೆ ಬರೆಯಲಾಗಿದೆ.ಅಲ್ಲದೆ ನಾಲ್ವರನ್ನು ಕೊಲೆಗೈದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಲೆಗೆ ಕಿರೀಟದ ಚಿತ್ರ ತೊಡಿಸಲಾಗಿದೆ.