ರಾಜಕೀಯರಾಜ್ಯ

ಕೆಲವರ ಬಾಯಿಂದ ‘ಮಾನ್ಯ ಅಧ್ಯಕ್ಷರೆ’ ಎಂಬ ಸಂಬೋಧನೆಯನ್ನು ಕೇಳಲು ಉತ್ಸುಕಳಾಗಿದ್ದೇನೆ-ನಜ್ಮಾ ನಜೀರ್



ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸಲ್ಮಾನ ಸಮುದಾಯದವರು ಸಭಾಪತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.ಅದರಲ್ಲೂ ವಿಶೇಷವಾಗಿ ಮಾನ್ಯ ಯು.ಟಿ ಖಾದರ್ ರವರು ಈ ಸ್ಥಾನ ಅಲಂಕರಿಸಿರುವುದು ವಿಧಾನಸಭೆಗು ಒಂದು ಭೂಷಣ ಎಂದು ಜಾತ್ಯಾತೀತ ಜನತಾದಳದ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಟ್ವೀಟ್ ಮಾಡಿದ್ದಾರೆ.

ಕೆಲವರ ಬಾಯಿಂದ ‘ಮಾನ್ಯ ಅಧ್ಯಕ್ಷರೆ’ ಎಂಬ ಸಂಬೋಧನೆಯನ್ನು ಕೇಳಲು ಉತ್ಸುಕಳಾಗಿದ್ದೇನೆ.
ಪಕ್ಷಾತೀತವಾಗಿ ಎಲ್ಲ ಪಕ್ಷದ ಸದಸ್ಯರ ಹಕ್ಕು ಬಾಧ್ಯತೆಗಳನ್ನು ಕಾಪಾಡುವ ಮೂಲಕ ಸಾಂವಿಧಾನಿಕ ಆಶಯದಂತೆ ಸಭಾಧ್ಯಕ್ಷರ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯುತ್ತೀರಿ ಎಂಬ ವಿಶ್ವಾಸವಿದೆ. ಶುಭಾಶಯಗಳು ಸನ್ಮಾನ್ಯ ಸಭಾಧ್ಯಕ್ಷರೆ. ಜೈ ಕರ್ನಾಟಕ, ಜೈ ಸಂವಿಧಾನ ಎಂದು ನಜ್ಮಾ ನಜೀರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!