ಪತಿಯ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ ಪತ್ನಿ
ಪತ್ನಿಯೇ ತನ್ನ ಪತಿಯ ನಾಲಗೆಯನ್ನು ಕಚ್ಚಿ ತುಂಡರಿಸಿರುವ ಘಟನೆ ಉತ್ತರ ಪ್ರದೇಶದ ಲಕ್ನೋದ ಠಾಕುರ್ಗಂಜ್ ಎಂಬಲ್ಲಿ ವರದಿಯಾಗಿದೆ.
ದಾಂಪತ್ಯ ಎಂದ ಮೇಲೆ ಜಗಳಗಳು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಅದಕ್ಕೆ ಗಂಡ-ಹಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆಯೇ ಇದೆ. ಒಂದೊಂದು ಸಲ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆಗಳಾಗಿರುವುದು, ಹತ್ಯೆ ಮಾಡಿರುವುದನ್ನು ದಿನನಿತ್ಯ ಕೇಳಿದ್ದೇವೆ.
ಉತ್ತರ ಪ್ರದೇಶದ ಲಕ್ನೋದ ಠಾಕುರ್ಗಂಜ್ ಎಂಬಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಪತಿಯ ನಾಲಗೆ ಕತ್ತರಿಸಿದ್ದಕ್ಕೆ ಪತ್ನಿ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ದಂಪತಿ ಮೂರು ವರ್ಷಗಳ ಹಿಂದೆ ಮುನ್ನಾ ಮತ್ತು ಸಲ್ಮಾ ಎಂಬುವವರು ವಿವಾಹವಾಗಿದ್ದರು. ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಕಳೆದ ಒಂದು ವರ್ಷದಿಂದ ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದರು. ಮಕ್ಕಳು ಪತ್ನಿಯ ಜೊತೆಯಲ್ಲಿ ಅವರ ತವರಿನಲ್ಲಿದ್ದ ಮನೆಯಲ್ಲಿದ್ದರು. ಈ ವೇಳೆ ಆಟೋ ಚಾಲಕನಾಗಿರುವ ಮುನ್ನಾ ತನ್ನ ಮಕ್ಕಳನ್ನು ನೋಡಲು ಹೋದಾಗ ಗಂಡ ಹೆಂಡತಿಯ ಮಧ್ಯೆ ಜಗಳ ನಡೆದು, ಅಂತಿಮವಾಗಿ ಹೆಂಡತಿ ಗಂಡನ ನಾಲಗೆಯನ್ನೇ ಕಚ್ಚಿದ್ದಾಳೆ.
ಆಟೋ ಚಾಲಕನಾಗಿರುವ ಮುನ್ನಾ ಪತ್ನಿಯ ಮನೆ ರಾಧಗ್ರಾಮ್ಗೆ ತನ್ನ ಮಕ್ಕಳನ್ನು ನೋಡಲು ಹೋಗಿದ್ದಾನೆ. ಆದರೆ ಪತ್ನಿ ಸಲ್ಮಾ ಮಕ್ಕಳನ್ನು ನೋಡಲು ಬಿಡಲಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪತ್ನಿಯನ್ನು ಗಟ್ಟಿಯಾಗಿ ಹಿಡಿದು ಹೊಡೆಯಲು ಪ್ರಯತ್ನಿಸಿದ್ದಾನೆ. ಮುನ್ನ ದಾಳಿಯಿಂದ ಬಿಡಿಸಿಕೊಳ್ಳಲಾಗದ ಪತ್ನಿ ಆತನ ನಾಲಗೆಯನ್ನು ಕಚ್ಚಿದ್ದಾಳೆ ಎಂದು ತಿಳಿದು ಬಂದಿದೆ.
ನಾಲಗೆಯನ್ನು ಕಚ್ಚಿದ್ದರಿಂದ ಆಟೋ ಚಾಲಕನಿಗೆ ತೀವ್ರ ರಕ್ತಸ್ರಾವವಾಗಿದೆ. ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಮುನ್ನಾನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದಂಪತಿಯ ಮಧ್ಯೆ ಮೂರು ವರ್ಷಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಶುಕ್ರವಾರ ಗಂಡ ತನ್ನ ಮಕ್ಕಳನ್ನು ಭೇಟಿಯಾಗಲು ಹಾಗೂ ಮನವಲಿಸಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಮುನ್ನಾ ಬಂದಿದ್ದ. ಆದರೆ ಇದಕ್ಕೆ ಪತ್ನಿ ಸಲ್ಮಾ ವಿರೋಧಿಸಿ ಗಲಾಟೆ ಮಾಡಿದ್ದಾಳೆ. ಜಗಳದ ವೇಳೆ ಪತಿಯ ನಾಲಗೆ ಕಚ್ಚಿದ್ದಾಳೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.