ಸುಳ್ಯ: ರಾಜಧಾನಿ ಜುವೆಲ್ಲರ್ಸ್ ಸಂಸ್ಥೆಯ ಉಚಿತ ಕೂಪನ್ ಯೋಜನೆ ಫೆ.28ರ ವರೆಗೆ ಮುಂದುವರಿಕೆ
ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಬಳಿ ಕಾರ್ಯಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ದೀಪಾವಳಿ, ಕ್ರಿಸ್ಮಸ್, ಸುಳ್ಯ ಜಾತ್ರೋತ್ಸವದ ಪ್ರಯುಕ್ತದ ಪ್ರತಿ ಖರೀದಿಗೆ ಉಚಿತ ಕೂಪನ್ ಯೋಜನೆಯನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು.

ಇದರಲ್ಲಿ ವಿಜೇತರಾದವರಿಗೆ ಡೈಮಂಡ್ ನೆಕ್ಲೇಸ್ ಬಹುಮಾನವಾಗಿ ಸಿಗಲಿದ್ದು ಈ ಯೋಜನೆ ಜನವರಿ 30ರವರೆಗೆ ಮಾತ್ರವೆಂದು ಘೋಷಿಸಲಾಗಿತ್ತು.
ಆದರೆ ಗ್ರಾಹಕರ ಕೋರಿಕೆಯ ಮೇರೆಗೆ ಈ ಯೋಜನೆಯನ್ನು ಫೆಬ್ರವರಿ ತಿಂಗಳ 28 ರವರೆಗೆ ಮುಂದೂಡಲಾಗಿದೆ ಎಂದು ಸಂಸ್ಥೆಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.