ಮೇನಾಲ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ಗೆ ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ಭೇಟಿ
ಪುತ್ತೂರು: ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ನ ಸೀನಿಯರ್ ಅಕಾಡೆಮಿಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಫೀಕ್ ಮಾಸ್ಟರ್ ಅವರು ಜೂನ್ 23ರಂದು ಶಾಲೆಗೆ ಭೇಟಿ ನೀಡಿ, ದಿನಪೂರ್ತಿ ವಿದ್ಯಾರ್ಥಿಗಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರನ್ನು ಪ್ರೋತ್ಸಾಹಿಸಿದರು.

ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಹನ ನಡೆಸಿದ ಅವರು, ಅವರ ಅಭಿರುಚಿ, ಪ್ರತಿಭೆ ಹಾಗೂ ಕೌಶಲ್ಯಗಳನ್ನು ಅರಿಯುವ ಪ್ರಯತ್ನ ಮಾಡಿದರು. ವಿವಿಧ ಆಟಗಳು ಹಾಗೂ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಬೆಳೆಸುವಂತೆ ಮಾರ್ಗದರ್ಶನ ನೀಡಿದರು.
ದಿನದ ಕೊನೆಯಲ್ಲಿ ಶಿಕ್ಷಕಿಯರೊಂದಿಗೆ ಅಮೂಲ್ಯ ಸಮಯ ಕಳೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಬ್ಬ ಉತ್ತಮ ಶಿಕ್ಷಕರಾಗಲು ಧನಾತ್ಮಕ ಮನೋಭಾವ ಅತ್ಯಗತ್ಯ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
ಮಕ್ಕಳೊಂದಿಗೆ ಶಿಕ್ಷಕರ ದಿನನಿತ್ಯದ ಚಟುವಟಿಕೆಗಳು ಅವರ ಭವಿಷ್ಯದ ಭದ್ರ ಬುನಾದಿಯಾಗುತ್ತವೆ ಎಂದು ತಿಳಿಸಿ, ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಶಿಕ್ಷಕಿಯರಿಗೆ ಪ್ರೇರಣೆ ನೀಡಿದರು.





