ಲೋನ್ ಕೊಡುವುದಾಗಿ ನಂಬಿಸಿ ಮಹಿಳೆಗೆ ವಂಚನೆ
ಬೆಳ್ತಂಗಡಿ: ಫೇಸ್ ಬುಕ್ ಆಪ್ ನಲ್ಲಿ Money View Personal Loan (LTD) ಆಪ್ ಮೂಲಕ ಮಹಿಳೆಯೋರ್ವರಿಗೆ ಅಪರಿಚಿತರು ಲೋನ್ ಕೊಡುವುದಾಗಿ ಪರಿಚಯಿಸಿಕೊಂಡಿದ್ದು ವಿವಿಧ ಹಂತದಲ್ಲಿ ರೂ 96,743 ನ್ನು ಹಣವನ್ನು ಆನ್ ಲೈನ್ ಮುಲಕ ವರ್ಗಾಯಿಸಿಕೊಂಡಿದ್ದು, ಆರೋಪಿತರು ಸಾಲವನ್ನು ನೀಡದೇ, ಹಣವನ್ನು ಹಿಂತಿರುಗಿಸದೇ ವಂಚಿಸಿರುವ ಘಟನೆ ನಡೆದಿದೆ.

ತೆಂಕಕಾರಂದೂರು ನಿವಾಸಿ ನೆಬಿಸಾ (38) ಎಂಬವರ ದೂರಿನಂತೆ, ಮಾ.21 ರಂದು ಪೇಸ್ ಬುಕ್ ಆಪ್ ನಲ್ಲಿ Money View Personal Loan (LTD) ಆಪ್ ಮೂಲಕ, ಅಪರಿಚಿತ ಆರೋಪಿತರು ಪರಿಚಯಿಸಿಕೊಂಡಿದ್ದು, ನೆಬಿಸಾ ಲೋನ್ ಬಗ್ಗೆ ಆರೋಪಿತರಿಂದ ಮಾಹಿತಿ ಪಡೆದು 5 ಲಕ್ಷ ಲೋನ್ ನೀಡುವುದಾಗಿ ನಂಬಿಸಿದ್ದು ನೆಬಿಸಾ ಅವರು ಅಪರಿಚಿತರಿಗೆ ದಾಖಲೆ ಪತ್ರಗಳನ್ನು ಕಳುಹಿಸಿರುತ್ತಾರೆ.
ಬಳಿಕ ಆರೋಪಿತರು ಪೋನ್ ಮೂಲಕ ಸಂಪರ್ಕಿಸಿ, ಮಾ. 28 ರ ತನಕ ವಿವಿಧ ಹಂತದಲ್ಲಿ ಒಟ್ಟು ರೂ 96,743 ನ್ನು ಹಣವನ್ನು ಆನ್ ಲೈನ್ ಮುಲಕ ವರ್ಗಾಯಿಸಿಕೊಂಡಿದ್ದು, ಆರೋಪಿತರು ನೆಬಿಸಾರವರಿಗೆ ಸಾಲವನ್ನು ನೀಡದೇ, ಹಣವನ್ನು ಹಿಂತಿರುಗಿಸದೇ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.